ಜನಧ್ವನಿ.in
ಜನಪರ ಸುದ್ದಿ,ಮಾಹಿತಿಯ ಜಾಲ
ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಜಗತ್ತು ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಅಂತರ್ಜಾಲದ ಅವಶ್ಯಕತೆ ನಮಗೆಲ್ಲರಿಗೂ ಅನಿವಾರ್ಯವಾಗಿದೆ.ನಮ್ಮ ಸಾಹಿತ್ಯ, ಸಂಸ್ಕೃತಿ,ಸಮಾಜಿಕ ಸಂದೇಶಗಳನ್ನು ಜನರೆಡೆಯಲ್ಲಿ ಹರಿಯಬಿಡುವಲ್ಲಿ ಇದೊಂದು ಪ್ರಬಲ ಮಾಧ್ಯಮವಾಗಿ ಮಾರ್ಪಾಡುಗೊಂಡಿದೆ. ಈ ಅವಶ್ಯಕತೆಯನ್ನು ಮನಗಂಡು ನಮ್ಮ ಕಲೆ,ಸಾಹಿತ್ಯ,ಸಮಾಜಮುಖಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಜನಪರ ಕಾಳಜಿಯೊಂದಿಗೆ janadhwani.in ಎಂಬ ಅಂತರ್ಜಾಲ ಪತ್ರಿಕೆಯೊಂದನ್ನು ರೂಫಿಸಿದ್ದೇವೆ.
ಗಡಿನಾಡ ವ್ಯಾಪ್ತಿಗೊಳಪಟ್ಟ ಗ್ರಾಮೀಣ ಸುದ್ದಿ ಮಾಹಿತಿಗಳನ್ನು ಹತ್ತೂರಿನ ಹಲವು ಮಂದಿಗಳ ಕೈಗೆ ತಲುಪಿಸುವುದರೊಂದಿಗೆ ನಮ್ಮೊಳಗಿರುವ ಸಾಹಿತ್ಯ,ಕಲೆ,ಸಮಾಜಿಕ ಚಟುವಟಿಕೆಗಳಿಗೆ ಇದೊಂದು ವೇದಿಕೆಯಾಗಬೇಕೆಂಬ ಆಶಯ ನಮ್ಮದು.
ವಸ್ತು ನಿಷ್ಠತೆಯ ಸುದ್ದಿ ಮಾಹಿತಿಗಳನ್ನು ಸತ್ಯಸಂಧತೆಯಿಂದ ನಮ್ಮ ಜನರ ಮುಂದಿಡುವುದರೊಂದಿಗೆ ನಮ್ಮ-ನಿಮ್ಮ ನಡುವೆ ಇರುವ ಸಾಧಕರನ್ನು ,ಎಲೆಮರೆಯ ಕಾಯಿಯಂತಾಗಿರು ಬಾಲ,ಯುವ ಪ್ರತಿಭೆಗಳ ಪ್ರೋತ್ಸಾಹಕ್ಕೆ ಇದೊಂದು ಪ್ರಮುಖ ಮಾಧ್ಯಮವಾಗಬೇಕು,ಆಶಕ್ತರ ಬಾಳಿಗೆ ಆಶಾ ಕಿರಣವಾಗಬೇಕು ಎಂಬ ಮಹತ್ತರ ಉದ್ದೇಶವು ಅಡಕವಾಗಿದೆ.
ನಮ್ಮ ಧಾರ್ಮಿಕ,ಆಧ್ಯಾತ್ಮಿಕ,ಶೈಕ್ಷಣಿಕ,ಸಮಾಜಿಕ,,ವ್ಯಾಪರ-ವ್ಯವಹಾರ,ಬಹುಭಾಷಾ ಸಾಹಿತ್ಯ ಹಾಗೂ ಸ್ಥಳೀಯ ಸಮಾಚಾರ(ಲೋಕಲ್ ನ್ಯೂಸ್),ರಾಜ್ಯ/ರಾಷ್ಟ್ರೀಯ ಸುದ್ದಿ ಮಾಹಿತಿಗಳನ್ನು ನಿಮ್ಮ ಕೈಯಲ್ಲಿ ಇರಿಸುವ ಮೂಲಕ ಜನಧ್ವನಿ.ಇನ್ ಕಾರ್ಯ ನಿರತವಾಗಲಿದೆ.
ಈ ಅಂತರ್ಜಾಲ ಪತ್ರಿಕೆಯನ್ನು ಸಕಾಲಿಕವಾಗಿ ಸಿದ್ಧಪಡಿಸಿ ಸೂಕ್ತ ಮಾರ್ಗದರ್ಶನವನ್ನು ನೀಡುವ ಹೊಣೆಗಾರಿಕೆಯನ್ನು ಮಂಗಳೂರಿನ ಪ್ರಖ್ಯಾತ Delta Astral Web Solution ಸಂಸ್ಥೆವಹಿಸಿಕೊಂಡಿದೆ. ನಮಿಗೆ ಸದಾ ಸಲಹೆ ಸೂಚನೆಗಳನ್ನು ನೀಡುವ ಇವರಿಗೆ ಹಾಗೂ ನಮ್ಮ ಆನ್ ಲೈನ್ ವೆಬ್ ಸೈಟನ್ನು ವೀಕ್ಷಿಸಿ ಪ್ರೋತ್ಸಾಹಿಸುತ್ತಿರುವ ನಿಮಗೆಲ್ಲರಿಗೂ ಜನಧ್ವನಿ.ಇನ್ ಮೀಡಿಯ ಬಳಗದ ಕೃತಜ್ಞತೆಗಳು.
Welcome
Delta astral offers a complete one stop shop for Internet , Mobile and Multimedia Solutions. We specialise in creating custom high quality websites.Our smart work will often describe who we are! We are providing quality website development in different CMS technologies around the globe. We work for the client’s satisfaction and will stand with you to grow your business organically. Running a business not only requires hard work but also requires effective smart work. We shall do both the works for an unbelievable cost!